ಅಕ್ಕಿನೆನಿ ಅಂದಿನ ಕಾಲದ ಕೊನೆ ಕೊಂಡಿ!
Posted date: 22 Wed, Jan 2014 – 08:13:53 PM
ಒಳ್ಳೆಯವರೆಲ್ಲ, ದಿಗ್ಗಜರೆಲ್ಲ ಎಲ್ಲಿದ್ದಾರೆ! ಅವರೆಲ್ಲ ಮೇಲಿದ್ದಾರೆ. ಈ ಭೂಮಿ ಬಣ್ಣದ ಭುಗುರಿ ಸಾಕು ಜೀವನ ನಡೀರಿ ಎಂದು ಒಬ್ಬಬ್ಬರಾಗಿ ಹೊರಡುತ್ತಿದ್ದಾರೆ. ಆದರೆ ಹೊರಡುವುದಕ್ಕೂ ಮುಂಚೆ ಘಟಾನುಘಟಿಗಳು ತಾವು ಬಿಟ್ಟು ಹೋಗುತ್ತಿರುವುದು ಅಪಾರವೆ ಸರಿ.

1950 ನಂತರದ ಸೂಪರ್ ಸ್ಟಾರ್ ಗಳಲ್ಲಿ ಅಕ್ಕಿನೆನಿ ನಾಗೇಶ್ವರ ರಾವು, ಎನ್ ಟಿ ಆರ್ ತೆಲುಗು ಸಿನೆಮದಿಂದ, ಎಂ ಜಿ ಆರ್, ಶಿವಾಜಿ ಗಣೇಶನ್ ತಮಿಳು ಸಿನೆಮದಿಂದ, ಪ್ರೇಮ್ ನಜೀರ್ ಒಬ್ಬರೇ ಮಲಯಾಳಂ ಸಿನೆಮದಿಂದ, ಡಾಕ್ಟರ್ ರಾಜಕುಮಾರ್ ಹಾಗೂ ಕಲ್ಯಾಣಕುಮಾರ್ ಕನ್ನಡ ಸಿನೆಮದಿಂದ ಉತ್ತುಂಗದಲ್ಲಿ ಇದ್ದವರು.

ಆದರೆ ಇಂದಿನ ದುರದೃಷ್ಟ ನೋಡಿ ಇದ್ದ ಒಂದು ಕೊಂಡಿ ಅಕ್ಕಿನೆನಿ ನಾಗೇಶ್ವರ ರಾವು ಸಹ ಈ ಭೂಮಿಯ ಪ್ರಯಾಣವನ್ನು ಮುಗಿಸಿದ್ದಾರೆ.

ಅಕ್ಕಿನೆನಿ ಅವರ ‘ದೇವದಾಸ್’ ಪಾತ್ರವನ್ನು ಸ್ವತಃ ದಿಲೀಪ್ ಕುಮಾರ್ ಹಿಂದಿ ಚಿತ್ರ ರಂಗದ ಮಹಾನ್ ನಟ ಮಾಡಲು ಸಾಧ್ಯವಿಲ್ಲ ಎಂದಿದ್ದಾರು. ಹೇಗೆ ಶಿವಾಜಿ ಗಣೇಶನ್ ಅವರು ಡಾಕ್ಟರ್ ರಾಜಕುಮಾರ್ ಅವರ ಭಕ್ತ ಕುಂಬಾರ ಸಿನೆಮಾ ನೋಡಿ ಈ ರೀತಿ ನನ್ನಲ್ಲಿ ಅಭಿನಯಿಸಲು ಸಾಧ್ಯವೇ ಇಲ್ಲ ಅಂದಿದ್ದರೋ ಹಾಗೆ.

ಅಕ್ಕಿನೆನಿ ಆಂಧ್ರ ಪ್ರದೇಶದಲ್ಲಿ ಅಷ್ಟೇ ಅಲ್ಲ ಮನೆ ಮಾತಾಗಿದ್ದು, ನೆರೆಯ ಕರ್ನಾಟಕ ರಾಜ್ಯದಲ್ಲೂ ಅವರು ಹೆಸರುವಾಸಿ. ಅವರು ಕುಟುಂಬದ ನಟ. 256 ಸಿನೆಮಗಳಲ್ಲಿ 91 ವರ್ಷಗಳಲ್ಲಿ ಅಭಿನಯಿಸಿದ್ದ ಅಕ್ಕಿನೆನಿ ‘ದಾದಾ ಸಾಹೇಬ್’ ಫಾಲ್ಕೆ ವಿಜೇತರು. ದಿಟ್ಟವಾಗಿ ಅವರು ನನಗೆ ಕಾನ್ಸರ್ ಖಾಯಿಲೆ ಇದೆ ಅಂದು ಪತ್ರಿಗೋಷ್ಟಿ ಕರೆದು ಹೇಳಿಕೊಂಡಿದ್ದರು.

ಅನ್ನಪೂರ್ಣ ಸ್ಟುಡಿಯೋದ ಮಾಲೀಕ ಅಕ್ಕಿನೆನಿ ಅದೆಷ್ಟೋ ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ, ಕಲಾವಿದರಿಗೆ ಅನ್ನ ನೀಡಿದ ಧಣಿ ಅಂತಲೂ ಹೇಳುವವರಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 50 ವರ್ಷ ತುಂಬಿದ ಘಳಿಗೆಯಲ್ಲಿ 1994 ರಲ್ಲಿ ಅಕ್ಕಿನೆನಿ ಅವರನ್ನು ಅಭಿನಂದಿಸಲಾಯಿತು. ಅಂದಿನ ಮುಖ್ಯಮಂತ್ರಿ ಶ್ರೀ ದೇವೇಗೌಡ ಹಾಗೂ ಡಾಕ್ಟರ್ ರಾಜಕುಮಾರ್ ಅವರ ಪಕ್ಕದಲ್ಲಿ ಕುಳಿತು ಅಕ್ಕಿನೆನಿ ನಾಗೇಶ್ವರ ರಾವು ಅವರು ಕಾರ್ಯಕ್ರಮಕ್ಕೆ ಮೆರಗು ತಂದಿದ್ದರು. ಅಂದು ಬಹಳ ಚಂದವಾಗಿ ಮಾತನಾಡಿದ್ದರು ಸಹ. ಅದೇ ಸಮಾರಂಭದಲ್ಲಿ ಜಿ. ಪಿ ಸಿಪ್ಪಿ, ಕೆ ಬಾಲಚಂದರ್ ಅವರನ್ನು ವಾಣಿಜ್ಯ ಮಂಡಳಿ ಸನ್ಮಾನಿಸಿತ್ತು. ಅದೊಂದು ಕೆ ಸಿ ಎನ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆದ ಅಚ್ಚುಕಟ್ಟಾದ ಸಮಾರಂಭ.  

ಅಂತರ ರಾಜ್ಯ ಕಲಾವಿದರುಗಳ ಕ್ರಿಕೆಟ್ ಮ್ಯಾಚ್ ಸಹ ಅವರು ಉದ್ಘಾಟಿಸಲು ಅಣ್ಣಾವಾರ ಜೊತೆ ಟಾಸ್ ಹಾಕಿ ಪರಿಹಾರ ನಿದಿಗೆ ಬೆಂಗಳೂರಿಗೆ ಬಂದಿದ್ದರು ನಮ್ಮ ನಿಮ್ಮೆಲ್ಲರ ಅಕ್ಕಿನೆನಿ ನಾಗೇಶ್ವರ ರಾವು. ಅಕ್ಕಿನೆನಿ ಅವರ ಲಾಸ್ಟ್ ವಿಸಿಟ್ ಟು ಬೆಂಗಳೂರು ಕಳೆದ ಸೆಪ್ಟೆಂಬರ್ 2013.

ಅಂದು ಪತ್ರಿಕೆಯವರೊಂದಿಗೆ 90 ತುಂಬಿದ ಅಕ್ಕಿನೆನಿ ಮಾತನಾಡುತ್ತಾ ವಿನಮ್ರವಾಗಿ 250 ಚಿತ್ರಗಳಲ್ಲಿ ನಟಿಸಿರುವ ನಾಗೇಶ್ವರ್‌ರಾವ್‌ ತಮ್ಮ ಖ್ಯಾತಿ ಹಾಗೂ ಯಶಸ್ಸಿಗೆ ತಾಯಿ ಮತ್ತು ಘಂಟಸಾಲಾ ರಾಮಯ್ಯ ಕಾರಣ ಎಂದಿದ್ದು, ಅಭಿನಯಿಸುತ್ತಿದ್ದ ದಿನಗಳಲ್ಲಿ ತಮಗೆ ನಿರಾಳಭಾವವಿತ್ತು ಎಂಬುದು ಅವರ ಅನುಭವ ನುಡಿ. ನನ್ನ ಮಕ್ಕಳು ಮಾತೃಭಾಷೆ ತೆಲುಗು  ಕಲಿಯಲಿ. ತೆಲುಗು ಮಾತನಾಡುವವರ ಒಡನಾಟದಲ್ಲಿ ಬೆಳೆಯಲಿ ಎಂದು ಬಯಸಿದೆ.
ಆದರೆ ಅವರಲ್ಲಿ ಯಾರೂ ಚಿತ್ರರಂಗ ಸೇರುವುದು ಇಷ್ಟವಿರಲಿಲ್ಲ. ನಾಗಾರ್ಜುನ ನನ್ನ ನಿರೀಕ್ಷೆಗೂ ಮೀರಿ ಬೆಳೆದ. ಸಿನಿಮಾ ಲೋಕ ಕೆಲವು ಪಾಠಗಳನ್ನೂ ಕಲಿಸಿದೆ. ಜೀವನದಲ್ಲಿ ಜವಬ್ದಾರಿಯನ್ನೂ ತಂದುಕೊಟ್ಟಿದೆ. ಜನರನ್ನು ಅರ್ಥ ಮಾಡಿಕೊಳ್ಳಲು, ಬದುಕನ್ನು ಸರಿದಾರಿಯಲ್ಲಿ ನಡೆಸಲು ಚಿತ್ರೋದ್ಯಮ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ನಾನು ಕಲಿಸಿದ ಜೀವನಮೌಲ್ಯಗಳನ್ನು ಮಕ್ಕಳು ಬದುಕಿನಲ್ಲಿ ಪಾಲಿಸಿಕೊಂಡು ಬರುತ್ತಿರುವುದು ಸಮಾಧಾನ ತಂದಿದೆ’ ಎಂದಿದ್ದರು ಅವರು.

ಅಭಿನಯದಲ್ಲಿ ಸ್ವರ್ಗ ಸುಖ ನೀಡಿದವರು ಇಂದು ಸ್ವರ್ಗಕ್ಕೆ ಸೇರಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed